JEEVI PARISARA SHAASTRA ALL COMPITETIVE EXAMS KPSC KAS PARIKSHEGALIGE ATHUPAYUKTHA
೧.೨ ಜೀವಿ ಪರಿಸರ ವ್ಯವಸ್ಥೆಯ ವಿವಿಧ ಹಂತಗಳು
೧. ಪ್ರಬೇಧಗಳು :
ಒಂದೇ ರೀತಿಯ ಲಕ್ಷಣಗಳನ್ನು ಹೊಂದಿದ್ದು ಹಾಗು ಯಾವುದೇ ಎರಡು ಜೀವಿಗಳು ಸೇರಿ ನೈಸರ್ಗಿಕ ಸಂತಜನೋತ್ಪತಿ ಇಂದ ಮತ್ತೊಂದು ಜೀವಿಗೆ ಜನ್ಮ ನೀಡಿದರೆ ಅಂತಹ ಜೀವಿಗಳನ್ನು ಒಂದೇ ಪ್ರಬೇಧ ಕ್ಕೆ ಸೇರಿಧ ಜೀವಿಗಳೆನ್ನುತ್ತಾರೆ .
* ವಂಶವಾಯಿಗಳನ್ನು ವಿನಿಮಯ ಮಾಡಬಹುದಾಢ್ ಅಥವಾ ತಳಿಯನ್ನು ಮಾಡಭಹುದ್ಹದ ನೈಸರ್ಗಿಕ ಜೀವಿಗಳ ಗುಂಪು ಉದಾಹರಣೆಗೆ : ಮಾನವರೆಲ್ಲ ಹೋಮೋಸೀಪೀಯನ್ಸ್ ಪ್ರಭೇದಕ್ಕೆ ಸೇರಿಧ ಜೀವಿಗಳಾಗಿರುತ್ತಾರೆ .
ಗಮನಿಸಿ : ಒಂದೇ ಪ್ರಭೇದದ ಜೀವಿಗಳಲ್ಲಿ ವಿಭಿನ್ನ ಭೌತಿಕ ಲಕ್ಷಣಗಳನ್ನು ಹೊಂದಿರುವ ಜೀವಿಗಳನ್ನು ಕಂಡುಬರಬಹುದು . ಅವುಗಳೆಂದರೆ: ಇಕಾಡ್ ಮತ್ತು ಏಕೋಟೈಪ್ಗಳು .
* ಇಕಾಡ್ .
ಒಂದೇ ವಂಶವಾಹಿ ವ್ಯವಸ್ಥೆಯನ್ನು ಒಂದಿರುವ ಒಂದೇ ಪ್ರಭೇದಕ್ಕೆ ಸೇರಿಧ ಜೀವಿಗಳಾಗಿದ್ದು ಆದರೆ ವಿಭಿನ್ನ ಭೌತಿಕ ಲಕ್ಷಣವನ್ನು ಹೊಂದಿರುತ್ತದೆ .
* ಇವು ಪರಿಸರದ ಪ್ರಭಾವದಿಂದ ಬದಲಾವಣೆಗೊಂಡಿರುತ್ತದೆ .
* ಇವು ಶಾರೀರಿಕ ಮತ್ತು ತಾತ್ಕಾಲಿಕ ಮಾರ್ಪಾಡುಗಳಾಗಿದ್ದು, ಈ ಜೀವಿಗಳು ಪರಿಸರವನ್ನು ಬದಲಾಯಿಸಿದಾಗ ಬದಲಾಗುತ್ತದೆ.
* ಉದಾ ; ಯುಫೋರ್ಬಿಯಾ ಇಕ್ಟ್ರಾ ಇದು ಹೊಣ ಮತ್ತು ಗಟ್ಟಿ ನೆಲದಲ್ಲಿ ವಿಶಾಲವಾಗಿ ಹರಡಿಕೊಂಡು ಬೆಳೆಯುತ್ತದೆ ಆದರೆ ಕಾಲುಹಾದಿಯಲ್ಲಿ ವಿಶಾಲವಾಗಿ ಬೆಳೆದಿರುವುದಿಲ್ಲ.
* ಏಕೋಟೈಪ್ .
ತುರೇನೆಸ್ ಎಂಬ ವಿಜ್ಞಾನಿ ೧೯೨೦ ರಲ್ಲಿ ಏಕೋಟೈಪ್ ಪದವನ್ನು ಬಳಸಿದರು ವಂಶವಾಹಿಕವಾಗಿ ವಿಭಿನ್ನವಾಗಿದ್ದರು ಒಂದೇ ಪ್ರಭೇದಕ್ಕೆ ಸೇರಿದ ಜೀವಿಗಳನ್ನು ಎಕೋಟೈಪಿಗಳೆಂದು ಕರೆಯುತ್ತಾರೆ .
* ಏಕೋಟೈಪ್ಗಳಲ್ಲಿ ಆಗುವ ಭೌತಿಕ ಮಾರ್ಪಾಡುಗಳು ಶಾಶ್ವತ ಹೊಂದಾಣಿಕೆಗಳಾಗಿದ್ದರಿಂದ ಪರಿಸರವನ್ನು ಬದಲಾಯಿಸಿದಾಗ ಮಾರ್ಪಾಡುಗಳು ಬದಲಾಗುವುದಿಲ್ಲ .
* ಉದಾ : ಮನುಷ್ಯರಲ್ಲಿನ ವಿವಿಧ ಜನಾಂಗಗಳು {ಆಫ್ರಿಕನ್ , ಮಂಗೋಲಿಯನ್ , ಕಾಕಸಸ್ , ಇತ್ಯಾದಿ }
* ವಂಶವಾಯಿ ಬದಲಾವಣೆಗಳು ಶಾಶ್ವತವಾಗಿ ತಮ್ಮ ವಂಶರುಕ್ಷವಾಗಿ ಮುಂದುವರಿಯುತ್ತದೆ .
* ಈ ಲಕ್ಷಣದಿಂದ ಪ್ರಭೇದಗಳಿಗೆ ತಮ್ಮ ಪರಿಸರ ವಾಪ್ತಿ ಮತ್ತು ಪ್ರಾದೇಶಿಕ ಅಂಚಿಕೆಯನ್ನು ಹೆಚ್ಚಿಸಿಕೊಳಲು ಸಹಾಯಕವಾಗುತ್ತದೆ .
* ಯಾವುದೇ ಪ್ರಭೇದದ ಹೊಸ ಹೊಸ ಏಕೋಟೈಪ್ಗಳಲ್ಲಿ ಅಲ್ಲಿನ ವಾಯುಗುಣ ಮತ್ತು ಇತರೆ ಅಜೈವಿಕ ಬದಲಾವಣೆ ಹೊಂದಿಕೊಳ್ಳಲು ಉತ್ಪತ್ತಿ ಮಾಡಲ್ಪಟ್ಟ ಶಾಶ್ವತ ಜೈವಿಕ ಮಾರ್ಪಾಡುಗಳಿಗೆ , ಬಾರತದಲ್ಲಿ ಆರ್ , ಮಿಶ್ರ ಮತ್ತು ರಾವ್ ರವರು ಈ ಪರಿಕಲ್ಪನೆಗಳನ್ನು ತಂದರು.
* ಜೀವಿ ಸಂದಣಿ ;
* ಒಂದು ಪ್ರದೇಶದಲ್ಲಿ ಒಂದೇ ರೀತಿಯ ಪ್ರಾಭೇದವನ್ನು ಜೀವಿಗಳ ಸಮೂಹವನ್ನು ಜೀವಿ ಸಂದಣಿಯನ್ನು ಜೀವಿ ಸಂದಣಿ ಎನ್ನುವರು .
* ಈ ಪರಿಕಲ್ಪನೆ ಆ ಜೀವಿಯ ಪ್ರಾದೇಶಿಕ ಹಂಚಿಕೆ , ಆ ಪ್ರಭೇದದ ಜೀವಿಗಳ ವಾಯೋರಚನೆ , ಆ ಪ್ರಭೇದದ ಜೀವಿಗಳ ಮರಣದರ , ಜೀವಿಸಂದಣಿ ಬೆಳವಣಿಗೆ ಇತ್ಯಾದಿಗಳನ್ನು ಅಧ್ಯಯನ ಮಾಡಲು ಸಹಾಯಕಾರಿ .
* ಜೀವಿ ಸಮುದಾಯ :
ಒಂದು ನಿರ್ದಿಷ್ಟ ಪ್ರದೇಶದಲ್ಲಿ ಒಂದೇ ಕಾಲದಲ್ಲಿ ಜೀವಿಸುವ ವಿವಿಧ ಪ್ರಭೇದಗಳ ಜೀವಿಗಳ ಸಮುದಾಯಗಳನ್ನು ಜೀವಿ ಸಮುದಾಯ ಎನ್ನುವರು .
ಉದಾ : ಬೆಟ್ಟದಲ್ಲಿ ವಾಸಿಸುವ ವಿವಿಧ ಜೀವಿಗಳ ಜೀವಿಸಮುದಾಯ ಕಣಿವೆ ಜೀವಿಸಮುದಾಯ {ಅಂದರೆ ಕಣಿವೆಯಲ್ಲಿ ಜೀವಿಸಮುದಾಯ ವಾಸಿಸುತ್ತಿರುವ ವಿವಿಧ ಪ್ರಾಣಿ , ಸಸ್ಯ , ಸೂಕ್ಷ್ಮ ಜೀವಿಗಳ ಒಟ್ಟು ಸಮೂಹ }
* ಬಯೋಮ್ ಜೀವಿಸಮೂಹ :
ಕ್ಲೆಮೆಂಟ್ ಮತ್ತು ಗೆಲ್ಫೋರ್ಡ್ರವರು {೧೯೩೯} ಈ ಪರಿಕಲ್ಪನೆಯನ್ನು ನೀಡಿದ್ದಾರೆ .
ಹಲವು ಸಮುದಾಯಗಳು ಸಂಕೀರ್ಣವಾಗಿದ್ದು , ವಿಭಿನ್ನ ಸಸ್ಯ , ಸಂಕುಲ ಪ್ರಾಣಿ ಸಂಕುಲ , ಹಂಚಿಕೊಂಡಿರುವ ಒಂದೇ ರೀತಿಯ ವಾಯುಗುಣವನ್ನು ಪ್ರತಿನಿಧಿಸುವ ಪ್ರದೇಶವಾಗಿದೆ. ಒಂದೇರೀತಿಯ ವಾಯುಗುಣದಲ್ಲಿ ಕಂಡುಬರುವ ಸಮುದಾಯಗಳನ್ನು ಒಟ್ಟಾಗಿ ಬಯೋಮ್ ಎನ್ನುತ್ತಾರೆ.
* ಭೂ ಪ್ರದೇಶಗಳ ಪರಿಸರ ವ್ಯವಸ್ಥೆಯನ್ನು; ಸಸ್ಯವರ್ಗ, ಪ್ರಾಣಿವರ್ಗ, ಸಮುದಾಯದ ಪ್ರಾಣಿಗಳು ಲಕ್ಷಣಗಳು ಮತ್ತು ಪರಿಸರ ಲಕ್ಷಣ ಆಧಾರಿತವಾಗಿ ಹೊಂದಿರುವ ಪ್ರದೇಶವೇ ಭಯೋಮ್.
ಉದಾ: ನಿತ್ಯ ಹರಿಧ್ವರ್ಣದ ಕಾಡುಗಳ ಬಯೋಮ್, ಮರುಬೂಮಿ ಬಯೋಮ್ ಇತ್ಯಾದಿ.
* ಭೂ ಪರಿಸರ ವ್ಯವಸ್ಥೆಗಳು ಅಥವಾ ಭಯೋಮ್ಗಳು :
ಜೀವಗೋಳದ ಬೂಮಿಯ ಭಾಗವು ಭಯೋಮ್ಗಳೆಂದು ಕರೆಯಲ್ಪಡುವ ಬೃಹತ್ ಪ್ರದೇಶಗಳಾಗಿ ವಿಭಜಿಸಲ್ಪಡುತ್ತದೆ , ಯಾವುದೇ ಎರಡು ಭಯೋಮ್ಗಳು ಒಂದೇ ರೀತಿ ಇರುವುದಿಲ್ಲ , ಅವು ವಿಶಿಷ್ಟವಾಧ ಹವಾಮಾನ { ಅವು ಮುಖ್ಯವಾಗಿ ಮಳೆ ಮತ್ತು ತಾಪಮಾನ }, ಸಸ್ಯವಾಗಿ, ಪ್ರಾಣಿಗಳನ್ನು ಹೊಂದಿದ್ದು, ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿವೆ.
* ಪ್ರಮುಖ ಭಯೋಮ್ಗಳು ತಂಡ್ರಾ :
* ಅಕ್ಟ್ರಿಕ್ ಮತ್ತು ಅಲ್ಫಿನ್ ಟ್ರಂಡ್ ಬಯೋಮ್ ಅರಣ್ಯ
* ಟೈಗಾ ಅಥವಾ ಬೋರಿಯಲ್ ಬಯೋಮ್ { ನಿತ್ಯಹರಿದ್ವರ್ಣದ ಕೊನಿಫೆರಾಸ್ ಕಾಡುಗಳು }
* ಸಮತೀತೋಷ್ಣ ಮಳೆಕಾಡುಗಳ ಬಯೋಮ್
* ಸಮಶೀತೋಷ್ಣ ಪತನಶೀಲ ಅರಣ್ಯಗಳ ಬಯೋಮ್ {ಉತ್ತರ ಪಶ್ಚಿಮ ಯುರೋಪ್- ಬ್ರಿಟಿಷ್ ಪ್ರಕಾರದ ಹವಾಮಾನ.
* ಪೂರ್ವ ಚೀನಾದಲ್ಲಿ ಉಪ - ಉಷ್ಣವಲಯದ ಪತನಶೀಲ ಅರಣ್ಯಗಳ ಬಯೋಮ್, ಆಗ್ನೇಯ USA
* ಸಮಶೀತೋಷ್ಣ ಪತನಶೀಲ ಅರಣ್ಯಗಳ ಬಯೋಮ್ {ಮಾನ್ಸೂನ್ ಹವಾಮಾನ }
* ಉಷಾನವಲಯಧ ಪತನಶೀಲ ಅರಣ್ಯಗಳ ಬಯೋಮ್ {ಮಾನ್ಸೂನ್ ಹವಾಮಾನ }
* ಸವಾನ್ನಾ ಅಥವಾ ಉಷ್ಣವಲಯದ ತೇವ ಮತ್ತು ಹೊರ ಅರಣ್ಯಗಳ ಬಯೋಮ್
* ಉಷ್ಣವಲಯದ ಮಳೆಕಾಡುಗಳ ಬಯೋಮ್ ಹುಲ್ಲುಗಾವಲು
* ಸ್ಟೆಪಿನ್ ಅಥವಾ ಸಮಶೀತೋಷ್ಣ ಹುಲ್ಲುಗಾವಲು ಬಯೋಮ್
* ಸವಾನ್ನಾ ಅಥವಾ ಉಷ್ಣವಲಯದ ತೇವ ಮತ್ತು ಒಣ ಬಯೋಮ್ {ಉಷ್ಣವಲಯದ ಪೊದೆ ಪ್ರದೇಶಗಳು ಮತ್ತು ಹುಲ್ಲುಗಾವಲು }
*ಉಷ್ಣವಲಯದ ಮತ್ತು ಮದ್ಯ ಅಕ್ಷಾಂಶಗಳ ಮರುಬೂಮಿ ಬಯೋಮ್
Comments
Post a Comment